ನಮ್ಮ ಸೇವಾ ಸಮಿತಿ
ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಸೇವಾಸಮಿತಿ ನವದೆಹಲಿ ಮತ್ತು ಕರ್ನಾಟಕ ಸೇವಾಮನೋಭಾವದ ಸಂಘಟನೆ. ೨೦೧೯ ರ ಮಕರ ಸಂಕ್ರಮಣದ ಪವಿತ್ರ ದಿನದಂದು ಆರಂಭಗೊಂಡು . ಈ ಸಮಿತಿಯ ಮೂಲಕ ʼಸಮಾಜ ಸಂಜೀವಿನಿʼಯಾದ ಪೂಜ್ಯ ಲಿಂ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ತ್ಯಾಗಮಯ ಜೀವನ ,ಸಮಾಜಕ್ಕೆ ಕೊಟ್ಟ ಅಪೂರ್ವ ಕೊಡುಗೆಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಪ್ರಮುಖ ಗುರಿಯೊಂದಿಗೆ ಸೇವಾ ಸಮಿತಿ ಕಾರ್ಯಪ್ರವೃತ್ತ ವಾಗಿದೆ.
ಸೇವೆಯ ಒಂದು ಮೆಲಕು
ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಸಾಧನೆಗಳ ಸಾಕ್ಷ್ಯ ಚಿತ್ರ “ಯುಗಪುರುಷ” ೫ ಐದು ಭಾಷೆಗಳಲ್ಲಿ
ಯುಗಪುರುಷ (ಆಂಗ್ಲ ಭಾಷೆಯಲ್ಲಿ) ೧೯-೦೧-೨೦೨೦ ರಂದು ವಾರಾಣಾಸಿಯಲ್ಲಿ ಲೋಕಾರ್ಪಣೆ ಯುಗಪುರುಷ (ಕನ್ನಡ ಭಾಷೆಯಲ್ಲಿ) ೧೬-೦೮-೨೦೨೦ ರಂದು ಜೋಯಿಸಹರಳ ಹಳ್ಳಿ ಯಲ್ಲಿ ಲೋಕಾರ್ಪಣೆ ಯುಗಪುರುಷ (ಹಿಂದಿ ಭಾಷೆಯಲ್ಲಿ ) ೧೦-೧೦-೨೦೨೧ ರಂದು ಸೊಲ್ಲಾಪುರದಲ್ಲಿ ಲೋಕಾರ್ಪಣೆ ಯುಗಪುರುಷ (ಮರಾಠಿ ಭಾಷೆಯಲ್ಲಿ) ,ಮಹಾರಾಷ್ಟ್ರ ಪರಳಿ ವೈದ್ಯನಾಥನ ಸನ್ನಿಧಾನದಲ್ಲಿ ಲೋಕಾರ್ಪಣೆಯ 21-07-2023 ಯುಗಪುರುಷ (ತೆಲಗು ಭಾಷೆಯಲ್ಲಿ ) ಸಿದ್ದತೆಗಳು ಪ್ರಗತಿಯಲ್ಲಿವೆ (ತೆಲಂಗಾಣದ ಹೈದರಾಬಾದ ಅಥವ ಶ್ರೀಶೈಲ ದಲ್ಲಿ ಲೋಕಾರ್ಪಣೆಯ ಯೋಜನೆ)
ಶ್ರೀ ಕುಮಾರೇಶ್ವರರ ಜೀವನ ಸಾಧನೆಗಳ ಕುರಿತಾದ ಚಲನಚಿತ್ರ
ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಸಾಧನೆಗಳ ಕುರಿತಾದ ಚಲನಚಿತ್ರ ದ ಕಾರ್ಯಕಾರಿ ನಿರ್ಮಾಪಕತ್ವದ ಸಂಪೂರ್ಣ ಹೊಣೆ ಹೊತ್ತು ೩೦-೯-೨೦೨೦ ರಿಂದ ೦೧-೧೨-೨೦೨೨ ರ ವರೆಗೆ ಸತತ ಮೂವತ್ತು ತಿಂಗಳು ಕಾರ್ಯ ನಿರ್ವಹಿಸಿ, ಯಶಸ್ವಿಯಾಗಿ ಹಸ್ತಾಂತರ
ಸಂಗೀತ ಧ್ವನಿ ಮುದ್ರಣ ನಿರ್ಮಾಣ
ಕವಿರತ್ನ ದ್ಯಾಂಪುರ ಚನ್ನಕವಿಗಳು ವಿರಚಿತ “ಶ್ರೀ ಕುಮಾರೇಶ್ವರ ನಾಮವಳಿ” ಸಂಗೀತ ಧ್ವನಿ ಮುದ್ರಣ ನಿರ್ಮಾಣ ಸಾಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆಯಿಂದ ಮುಂದುವರೆಯುತ್ತಿದೆ. ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಂದಿಗುಂದ ವಿರಚಿತ “ಶ್ರೀ ಕುಮಾರೇಶ್ವರರ ದೊಹೆಗಳು” ಸಂಗೀತ ಧ್ವನಿ ಮುದ್ರಣ ನಿರ್ಮಾಣ ಸಾಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆಯಿಂದ ಮುಂದುವರೆಯುತ್ತಿದೆ. ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಂದಿಗುಂದ ವಿರಚಿತ “ಶ್ರೀ ಕುಮಾರೇಶ್ವರ ಭಜನ್” ಸಂಗೀತ ಧ್ವನಿ ಮುದ್ರಣ. ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ರಚಿಸಿದ ಪದ್ಯಗಳು ಹಾಗು ಪರಮ [...]
ವಾರ್ಷಿಕ ಕಾರ್ಯಕ್ರಮಗಳ ಆಯೋಜನೆ
ಅಂತರ್ಜಾಲದ ಮೂಲಕ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜಯಂತಿ ಮಹೋತ್ಸವ ಪ್ರತಿವರ್ಷ ಐದುದಿನಗಳ ವಿಚಾರ ಸಂಕೀರ್ಣ ಮತ್ತು ಸಂಗೀತ ಕಾರ್ಯಕ್ರಮ ಆಯೋಜನೆ (೨೦೨೦, ೨೦೨೧ ಮತ್ತು ೨೦೨೨) ರಾಜಯೋಗಿ ಶ್ರೀ ಮ ನಿ ಪ್ರ ಶಿವಬಸವ ಮಹಾಸ್ವಾಮಿಗಳವರ ೭೮ನೆಯ ಪುಣ್ಯಾರಾಧನೆಯ ನುಡಿನಮನ ೧೯-೦೨-೨೦೨೪ ಅಣ್ಣಿಗೇರಿ ಯಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಪುಣ್ಯಾರಾಧನೆ ಉತ್ಸವ ಆಚರಣೆ (೨೦೨೦, ೨೦೨೧ , ೨೦೨೨, ೨೦೨೩, ೨೦೨೪) ಅಣ್ಣಿಗೇರಿ ಯಲ್ಲಿ [...]
ಕ್ರಿಯಾಸಮಾಧಿಯ ಮೂರ್ತಿ ಮತ್ತು ಸ್ಮಾರಕ ಮೂರ್ತಿ ಗಳ ನಿರ್ಮಾಣ
ಅಣ್ಣಿಗೇರಿ ಯಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಪಂಚಲೋಹದ ಮೂರ್ತಿ ( ೧೨-೦೧-೨೦೨೧) ಹಾವೇರಿಯ ಹುಕ್ಕೇರಿಮಠದ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಆತ್ಮಪ್ರತಿರೂಪ ಪರಮಪೂಜ್ಯ ಶಿವಬಸವಸ್ವಾಮಿಗಳ ಕ್ರಿಯಾ ಸಮಾಧಿಯ ಮೇಲೆ ನಿತ್ಯ ಪೂಜೆಗೆ ಅಮೃತಶಿಲೆಯ ಮೂರ್ತಿ ನಿರ್ಮಾಣ (೧೩-೦೧-೨೦೨೧) ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಕ್ರಿಯಾಸಮಾಧಿಯ ಮುಂದೆ ಶ್ರೀ ಕುಮಾರೇಶ್ವರರ ಪಂಚಲೋಹದ ಮೂರ್ತಿ ನಿರ್ಮಾಣ (೨೩-೦೨-೨೦೨೨) ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ [...]
ಜೀರ್ಣೋದ್ಧಾರ ಮತ್ತು ಮಾಹಿತಿ ಫಲಕಗಳ ಅಳವಡಿಕೆ
ಪರಮಪೂಜ್ಯ ಲಿಂ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರಿಗೆ ಚಿನ್ಮಯಾನುಗ್ರಹ ನೀಡಿದ ದೀಕ್ಷಾ ಗುರುಗಳು, ಯೋಗ, ಷಟ್‌ಕರ್ಮ ಮತ್ತು ಶಿವಯೋಗ ರಹಸ್ಯಗಳನ್ನು ತಿಳಿಸಿಕೊಟ್ಟ ಗುರುಗಳಾದ ಪರಮಪೂಜ್ಯ ಲಿಂ ಯಳಂದೂರು ಬಸವಲಿಂಗ ಶಿವಯೋಗಿಗಳ ಕ್ರಿಯಾಸಮಾಧಿಯ ಮಂಟಪ (ಅಣ್ಣಿಗೇರಿ) ಜೀರ್ಣೋದ್ಧಾರ ಮತ್ತು ಮಾಹಿತಿ ಫಲಕ ಶ್ರೀ ಶಿವಯೋಗಮಂದಿರದಲ್ಲಿ ೧೯-೦೨-೧೯೩೦ ರಂದು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಲಿಂಗ ಶರೀರದ ಅಂತಿಮ ದರ್ಶನದ ಸ್ಥಳಕ್ಕೆ ಬೃಹತ್ತ ಭಾವಚಿತ್ರ ಮತ್ತು ಮಾಹಿತಿ ಫಲಕ ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ [...]
ಅಂತರ್ಜಾಲ ಬ್ಲಾಗ್
ಶ್ರೀ ಶಿವಯೋಗಮಂದಿರದ ಐತಿಹಾಸಿಕ ಕೈಬರಹದ ಪತ್ರಿಕೆ ೧೯೩೬ ರ “ಸುಕುಮಾರ” ಪತ್ರಿಕೆಯ ಬ್ಲಾಗ್ ರೂಪದಲ್ಲಿ ಅನಾವರಣ https://journal shrikumar com/ “ಸುಕುಮಾರ” ಮಾಸಿಕ ಬ್ಲಾಗ್ ಸುಕುಮಾರ ಮುದ್ರಣ ಮಾಧ್ಯಮದಲ್ಲಿ ಶ್ರೀ ಶಿವಯೋಗಮಂದಿರ ಆಡಳಿತದಲ್ಲಿ ಬಂದ ಸಂಭ್ರಮಕ್ಕೆ ಮಾಸಿಕ ಬ್ಲಾಗ್ “ಶ್ರೀಕುಮಾರ ತರಂಗಿಣಿ” ಹೆಸರಿನಲ್ಲಿ ಪ್ರಕಟಣೆ
ಸಾಮಾಜಿಕ ಜಾಲತಾಣಗಳ ನಿರ್ವಹಣೆ
@HanagalShriKumaraShivayogi - Facebook Page HanagalShriKumaraShivayogi - Facebook Hanagal Shri Kumar Shivayogi - YouTube Channel Hanagal Shri Kumar Shivayogi @HanagalShri - Twitter
ಪುಸ್ತಕ ಪ್ರಕಟಣೆ
ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಕುರಿತು “ ಮಹಾ ಗುರುವಿನ ಗುರು” ಪುಸ್ತಕ ಪ್ರಕಟಣೆ (೨೦೨೧) Life of a Mystic: Biography of Hanagal Shri Kumara Shivayogi By Shri Gurukanda
ಶ್ರೀ ಶಿವಯೋಗಮಂದಿರದ ಈ-ಲೈಬ್ರರಿ
ಪ್ರಾಯೋಗಿಕವಾಗಿ ಶ್ರೀ ಶಿವಯೋಗಮಂದಿರದಲ್ಲಿ ೧೦೦೦ ಕನ್ನಡ ಈ ಪುಸ್ತಕಗಳ ಸಂಗ್ರಹ ,ಪ್ರಾಯೋಗಿಕ ಕಂಪ್ಯೂಟರ್ ಸರ್ವರ ಮತ್ತು ಅಮೆಜಾನ್ ಈ ರೀಡರ್ ಕಿಂಡಲ್ ಗಳ ಸ್ಥಾಪನೆ (೫-೦೭-೨೦೨೦)
ಶ್ರೀ ಶಿವಯೋಗಮಂದಿರದ ತಾಳೆ ಗ್ರಂಥಗಳ ರಕ್ಷಣೆ
ನವದೆಹಲಿಯ National Mission for Manuscripts ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಶಿವಯೋಗಮಂದಿರದ ೯೦೦ ಕ್ಕೂ ಹೆಚ್ಚು ತಾಳೆ ಗ್ರಂಥ ಗಳ ರಕ್ಷಣ ಕಾರ್ಯ ನಿರ್ವಹಣೆ
ಶ್ರೀ ಶಿವಯೋಗಮಂದಿರದ ಪ್ರವಾಹ ರಕ್ಷಣೆಯ ಕುರಿತು ಸಮಗ್ರ ವರದಿ
ಸಿವಿಲ್ ಇಂಜನಿಯರಿಂಗ್ ವಿಭಾಗದ ಹಿರಿಯ ಪ್ರಾದ್ಯಾಪಕರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಸತತ ಆರು ತಿಂಗಳ ಕಾಲ ಶ್ರೀ ಶಿವಯೋಗಮಂದಿರಕ್ಕೆ ಆಗಾಗ ಬಂದೊದಗುವ ಪ್ರವಾಹದ ಕುರಿತು ಸಮಗ್ರ ಅಧ್ಯಯನ ಮತ್ತು ರಕ್ಷಣಾ ಗೋಡೆ ಮತ್ತು ಡ್ರೇನೆಜಗಳ ಅವಶ್ಯಕತೆ ಕುರಿತು ಸಮಗ್ರ ವರದಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.