ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦)
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦) ಈ ನಾಡುಕಂಡ ಮಹಾನುಭಾವರು .ಅವರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿದ್ದು ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ,ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದ್ದ ವೀರಶೈವ -ಲಿಂಗಾಯತ ಧರ್ಮೀಯರನ್ನ ತಮ್ಮ ಸಮಾಜೋದ್ಧಾರ ಯೋಜನೆ ಮತ್ತು ಕಾರ್ಯಗಳಿಂದ ಎತ್ತಿನಿಲ್ಲಿಸಿದವರು.
ಅವರಿಗೆ “ ಕಾರುಣಿಕ ಯುಗ ಪುರುಷ” ,”ಸಮಾಜ ಸಂಜೀವಿನಿ” ಎಂಬೆಲ್ಲ ಬಿರುದು ಉಪಮೆಗಳಿಂದ ಗೌರವಿಸಲಾಗುತ್ತಿದೆ.ಅವರ ೧೫೭ನೆಯ ಜಯಂತಿ ಮಹೋತ್ಸವ ಕರ್ನಾಟಕ ಮತ್ತು ದೇಶ -ವಿದೇಶಗಳ ವಿವಿಧ ಸ್ಥಳಗಳಲ್ಲಿ ಈ ತಿಂಗಳು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಅವರು ಕೇವಲ ನುಡಿದು ಮರೆಯಾಗಲಿಲ್ಲ.
ನಡೆದು ಬದುಕಿದವರು
ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ ಸಮಾಜಕ್ಕೇ ಅರ್ಪಿಸಿದ ಮಹಾತ್ಮರು
ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ ಮುನ್ನೆಡೆಯುತ್ತಿವೆ